Wednesday, 31 October 2018

ಕರ್ನಾಟಕದ ಪ್ರಥಮಗಳು

=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

ಸರ್ದಾರ್ ವಲ್ಲಭಭಾಯ್ ಪಟೇಲ್

ಸರ್ದಾರ್ ಪಟೇಲರು  ಹುಟ್ಟಿದ್ದು ಅಕ್ಟೋಬರ್ 31 1875ರ ವರ್ಷದಲ್ಲಿ.  ನಿರ್ಣಯಗಳಲ್ಲಿ ‘ಉಕ್ಕಿನ ಮನುಷ್ಯ’ರಾಗಿ, ಹೃದಯವಂತಿಕೆಯಲ್ಲಿ, ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತೆಯಲ್ಲಿ ಮಹಾ ಮಾನವರಾದ ಪಟೇಲರು  ಸಾರ್ವಕಾಲಿಕವಾಗಿ ನಮ್ಮ ಭಾರತೀಯ ಹೃದಯಗಳಲ್ಲಿ ಪ್ರಜ್ವಲಿತ ಹಣತೆಯಂತೆ ಬೆಳಗುತ್ತಲೇ ಇದ್ದಾರೆ.   ಗುಜರಾತಿನ ನಡಿಯಾದ್ ಪಟೇಲರು ಹುಟ್ಟಿದ ಊರು.

ಪಟೇಲರು ಶಾಲೆ ಸೇರಿದ್ದು ತಡವಾಗಿ.  ಪಟೇಲರು ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದಾಗ ಅವರಿಗೆ 22 ವರ್ಷ! ಮುಂದೆ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಅವರು ಕಾಲೇಜು ವಿದ್ಯಾಭ್ಯಾಸದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ ಬ್ಯಾರಿಸ್ಟರ್ ಪದವಿ ಪರೀಕ್ಷೆಯಲ್ಲಿ ತರಗತಿಗೇ ಪ್ರಥಮರಾಗಿ ಉತ್ತೀರ್ಣರಾದರು. ಅಲ್ಲಿಂದ ಹಿಂತಿರುಗಿ ಅಹಮದಾಬಾದಿನಲ್ಲಿ ನೆಲೆನಿಂತು, ಅಲ್ಲಿನ ಅಗ್ರಮಾನ್ಯ ಬ್ಯಾರಿಸ್ಟರುಗಳಲ್ಲಿ ಒಬ್ಬರೆಂದು ಹೆಸರಾದರು.

1918ರಲ್ಲಿ ಪಟೇಲರು ಚೆನ್ನಾಗಿ ನಡೆಯುತ್ತಿದ್ದ ತಮ್ಮ ವಕೀಲಿ ವೃತ್ತಿ, ಅದರ ಘನತೆ, ಗೌರವ, ದೊಡ್ಡ ಮನೆ, ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ ಮತ್ತು ಕಷ್ಟಕಾರ್ಪಣ್ಯಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಗುಜರಾತಿನ ಖೇಡಾ ವಿಭಾಗವು ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಗಾಂಧಿಯವರು ಚಂಪಾರಣ್ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕಾರಣ  ಪಟೇಲರು ಖೇಡಾ  ಹೋರಾಟದ ನೇತೃತ್ವ ವಹಿಸಿದರು.   ತಮಗೆ ಬೆಂಬಲವಾಗಿ ನಿಂತ ನರಹರಿ ಪಾರೀಖ್, ಮೋಹನಲಾಲ್ ಪಾಂಡ್ಯ, ಸಾರಾಭಾಯಿ, ಅಬ್ಬಾಸ್ ತ್ಯಾಬ್ಜೀ ಅವರುಗಳೊಂದಿಗೆ ರಾಜ್ಯಾದ್ಯಂತ ಎಲ್ಲ ವರ್ಗದ ಜನರೂ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಬ್ರಿಟಿಷ್ ಸರ್ಕಾರವನ್ನು ಮಣಿಸಿ ಯಶಸ್ಸು ಪಡೆದ ರೀತಿ, ಅವರಿಗೆ ಭಾರತದಾದ್ಯಂತ ರಾಜಕೀಯ ಧುರೀಣರೆಲ್ಲರ ಮೆಚ್ಚುಗೆಯನ್ನು ತಂದಿತು. 1919ರಿಂದ 1928ರ ವರೆಗೆ ಪಟೇಲರು  ಅಸ್ಪ್ರಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಞಾನಗಳ ವಿರುದ್ಧವಾಗಿ ವ್ಯಾಪಕವಾಗಿ ಕಾರ್ಯನಿರ್ವಹಿಸಿದರು. 1922ರಲ್ಲಿ ಪಟೇಲರು ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು. ಇವರ ಆಡಳಿತಾವಧಿಯಲ್ಲಿ ಅಹಮದಾಬಾದ್ ನಗರವು ವಿದ್ಯುತ್ ಸರಬರಾಜು, ಚರಂಡಿ, ನೈರ್ಮಲ್ಯ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳನ್ನು ಕಂಡಿತು.

1928ರಲ್ಲಿ ಬಾರ್ಡೋಲಿ ಪ್ರದೇಶ ದುರವಸ್ಥೆಗೀಡಾಯಿತು. ಗುಜರಾತಿನ ಬಹುತೇಕ ಭಾಗಗಳು ಕ್ಷಾಮದಿಂದ ತತ್ತರಿಸುವುದರೊಂದಿಗೆ,  ಸರ್ಕಾರ  ಕಂದಾಯವನ್ನೂ ಹೆಚ್ಚು ಮಾಡಿತು. ಇದರ ವಿರುದ್ಧವಾಗಿ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆಯು ದೇಶದಲ್ಲೆಲ್ಲ ಪ್ರಸಿದ್ಧಿ ಪಡೆಯಿತು. ಖೇಡಾ ಸತ್ಯಾಗ್ರಹಕ್ಕಿಂತ ಉಗ್ರವಾಗಿದ್ದ ಈ ಪ್ರತಿಭಟನೆಗೆ ಬೆಂಬಲವಾಗಿ ಗುಜರಾತಿನ ಅನೇಕ ಕಡೆಗಳಲ್ಲಿ ಜನರು ಸತ್ಯಾಗ್ರಹ ಹೂಡಿದರು. ಈ ಎರಡೂ ಹೋರಾಟಗಳು ಮುಗಿದ ನಂತರದಲ್ಲಿ ಪಟೇಲರು, ಜನಸಾಮಾನ್ಯರು ಕಳೆದುಕೊಂಡಿದ್ದ ಭೂಮಿಕಾಣಿ ಹಾಗೂ ಆಸ್ತಿಪಾಸ್ತಿಗಳನ್ನು ಮತ್ತೆ ಅವರಿಗೆ ಹಿಂದಿರುಗಿಸಿಕೊಡಲು ಹಗಲೂರಾತ್ರಿ ಶ್ರಮಿಸಿದರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರ್ದಾರ್  ಎಂಬ ಬಿರುದು ಪ್ರಾಪ್ತವಾಯಿತು. ಗುಜರಾತಿನ ಲಕ್ಷಾಂತರ ಜನರಿಗೆ ಪಟೇಲರು ಆರಾಧ್ಯದೈವವಾದರು.

ಜಿನ್ನಾರ ನಾಯಕತ್ವದಲ್ಲಿ ದಿನೇದಿನೇ ಹೆಚ್ಚುತ್ತಿದ್ದ ಮುಸ್ಲಿಮ್ ಪ್ರತ್ಯೇಕತಾ ಬೇಡಿಕೆಯಿಂದ ಭಾರತದ ವಿಭಜನೆ ಅನಿವಾರ್ಯ ಎಂಬ ನಿರ್ಣಯಕ್ಕೆ ಬಂದ ಮೊದಮೊದಲ ಕಾಂಗ್ರೆಸ್ ನಾಯಕರುಗಳಲ್ಲಿ ಪಟೇಲರೂ ಒಬ್ಬರಾಗಿದ್ದರು. ಈ ವಿಷಯದಲ್ಲಿ ಅತ್ಯಂತ ದುಃಖಿಗಳಾಗಿದ್ದ ಗಾಂಧಿಯನ್ನು ವಿಭಜನೆಯ ಅನಿವಾರ್ಯತೆಯ ಬಗ್ಗೆ ಒಪ್ಪಿಸುವ ಕಾರ್ಯವನ್ನು ಪಟೇಲರೇ ವಹಿಸಿಕೊಂಡರು.

ಪಾರ್ಟಿಷನ್ ಕೌನ್ಸಿಲ್ಲಿನಲ್ಲಿ  ಭಾರತದ ಪರವಾದ ಸದಸ್ಯರಾಗಿ ಪಟೇಲರು ಸರಕಾರಿ ಆಡಳಿತ ಯಂತ್ರಗಳ, ಆಸ್ತಿಪಾಸ್ತಿಗಳ ಸೂಕ್ತಹಂಚಿಕೆಯ ಮೇಲುಸ್ತುವಾರಿ ವಹಿಸಿದ್ದರು.  ನೆಹರೂ ಮತ್ತು ಪಟೇಲರು ಜಂಟಿಯಾಗಿ ಕೇಂದ್ರ ಮಂತ್ರಿಮಂಡಲವನ್ನು ನಿರ್ಣಯಿಸಿ, ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು.

ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ,  565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ, ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ, ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡು ಯಶಸ್ವಿಯಾಗಿ ನಿರ್ವಹಿಸಿದರು.   ಅಷ್ಟೇ ಅಲ್ಲದೆ ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ, ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು.  ಪಟೇಲರ ಕುಶಲ ಸಂಧಾನದಿಂದಾಗಿ ಕಾಶ್ಮೀರ, ಹೈದರಾಬಾದು ಮತ್ತು ಜುನಾಘಢ ರಾಜ್ಯಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದ್ದವು. ಜುನಾಘಡದ ರಾಜ ಮತ್ತು ಹೈದರಾಬಾದಿನ ನಿಜಾಮರ ಮೇಲೆ ಬಿಸಿ ಮುಟ್ಟಿಸಿ ಭಾರತದಲ್ಲಿ ಒಂದಾಗಿಸಿದರು. 

ಪಟೇಲರ ಅಪ್ರತಿಮ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ‘ಬಿಸ್ಮಾರ್ಕ್’ ಎಂದೇ ಕರೆಯಲಾಗುತ್ತದೆ. ಭಾರತದ ಅಪ್ರತಿಮ ಪುತ್ರ ಸರ್ದಾರರು ಭಾರತೀಯರ ಜನಮಾನಸದಲ್ಲಿ ನಿರಂತರವಾಗಿ ಮನೆಮಾಡಿರುವ ಅನರ್ಘ್ಯ ರತ್ನ.  ಈ ಮಹಾನ್ ನಾಯಕರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.

Current Affairs: 31 October 2018

1. Q : German Chancellor Angela Merkel has announced that she will resign her post this year?
Ans : "2021",

2. Q : Where was the 5th National Summit organized on 'Public Health Care' in October 2018?
Ans : Kaziranga,

3. Q : The Supreme Court has recently banned 15 year old petrol and 10 year diesel vehicles in the following State / Union Territory?
Ans : Delhi,

4. Q : Which of the following places will be built in India's largest dry port?
Ans : Cochin Shipyard, Kochi,

5. Q : SWAS, SAFAL and STAR ...... started by CSIR?
Ans : Fire crackers,

6. Q : Where is the first Mega Food Park of Gujarat opened?
Ans : face,

7. Q : With which country did the "Cool EMS service" begin with?
Ans : Japan,

8. Q : Which country recently signed a $ 75 billion 'Karansee Swap' agreement?
Ans : Japan,

9. Q : Which country has agreed to establish a 2 + 2 communication system between the defense and external affairs ministries of two countries in October 2018 (excluding America) with India?
Ans : Japan,

10. Q : In which state will Prime Minister Narendra Modi inaugurate the highest statue of Sardar Patel in the world on October 31, 2018?
Ans : Gujarat,

11. Q : Indian bowler Kuldeep Yadav has become the highest wicket-taker in the year 2018, the bowler of _____ number?
Ans : Another,

12. Q : Which day is celebrated on October 31 in the world?
Ans : National Integration Day,

13. Q : Whose birth anniversary is celebrated on October 31?
Ans : Sardar Vallabh Bhai Patel,

14. Q : Urdu language's legendary writer, Padmashree Professor Kazi Abdul has died recently, how old were he?
Ans : 87 years,

15. Q : Who recently developed a miniature robot named "senses"?
Ans : MIT,

16. Q : Which rich person in the world has lost $ 19.2 billion in the past two business days?
Ans : Jeff Bezos,

17. Q : Which Education Board has accepted the proposal to teach Vedic Mathematics to children in the year 2019?
Ans : U.P Board,

18. Q : According to a report released recently, 6,00,000 children have died due to air pollution in India in 2018?
Ans : WHO,

19. Q : In which state Union Food Minister has inaugurated Mega Food Park?
Ans : Gujarat,

20. Q : Which of the Indian Airports has recently joined the 20 most busy airports list of the world?
Ans : Indira Gandhi International Airport

Sunday, 10 September 2017

🔴E-Banking Commission.

🔘RH Khan Committee – Harmonization of Bank.
               
🔘RS Saria Committee – Agriculture Finance and Co-operative Societies.
               
🔘Rajamannar Committee – Center – State Fiscal Relationships.
               
🔘Rakesh Mohan Committee – Petro Chemical Sector.
               
🔘Samal Committee – Rural Credit.
               
🔘SS Tarapore Committee – Capital Account Convertibility.
               
🔘SS Kohli Committee – Rehabilitation of Sick Industries unit, Wilful Defaulters and Staff strength in Banks.
               
🔘Sodhani Committee – Foreign Exchange Markets in NRI investment in India.
               
🔘SL Kapoor Committee – Institutional Credit to SSI.
               
🔘S Padmanabhan Committee – Onsite Supervision function of Banks and Inspection of Banks (by RBI).
               
🔘SS Nadkarni Committee – Trading in public sector banks.
               
🔘Tiwari Committee – Rehabilitation of sick industrial undertakings.
               
🔘Tandon Committee – Follow up of bank credit and Industrial sickness.
               
🔘Tambe Committee – Term loans to SSI.
               
🔘Thakkar Committee – Credit Schemes to self-employed.
               
🔘Usha Thorat Panel – Financial Inclusion.
               
🔘UK Sharma Committee – Lead bank scheme.
               
🔘Vipin Malik Committee – Consolidated accounting by banks.
               
🔘Vyas Committee – Rural Credit.
               
🔘Varshney Committee – Revised methods for loans (greater than Rs. 2lakh)
               
🔘Vaghul Committee – Mutual Fund scheme.
               
🔘WS Saraf Committee – Technology Issues in banking industry.
               
🔘Wanchoo Committee – Direct Taxes.
               
🔘YV Reddy Committee – Reforms in Small savings.
               
🔘Y H Malegam Committee – Disclosure norms for Public Issues.

🔘 ಅಳತೆ ಮಾನಗಳು 🔘

1] 1 ಅಂಗುಲ/ಇಂಚು=2.54cm

2] 1 ಅಡಿ/ಫೂಟು = 30.48cm

3] 1 ಗಜ/ಯಾಡ್೯=0.914m

4] 12 ಅಂಗುಲ =1 ಅಡಿ

5] 3 ಅಡಿ = 1 ಗಜ

6] 220 ಗಜ = 1 ಫರ್ಲಾಂಗ್

7] 8 ಫರ್ಲಾಂಗ್ = 1 ಮೈಲಿ

8] 1 ಮೈಲಿ = 1.61 km

9] 1 km = 0.62 ಮೈಲಿ

------------------------------------------------

10] 1 ಔನ್ಸ್ = 28.35 GM

11] 1 ಪೌಂಡ್ = 0.45 kg

12] 1 km=2.204623 ಪೌಂಡ್

13] 1 km= 1000 m

14] 1 m = 100 cm

15] 1cm = 10 NM

16] 1 kg = 1000 gm

17] 1 gm = 1000 mg

🔘 ‘ಸಾಮಾಜಿಕ ಬಂಡವಾಳ’ ಎಂದರೇನು?

ಒಬ್ಬ ವ್ಯಕ್ತಿಯ ಸಾಮಾಜಿಕ ಸಂಪರ್ಕ ಜಾಲದಲ್ಲಿ ಅಂತರ್ಗತವಾಗಿರುವ ಮಾಹಿತಿ, ನಂಬಿಕೆ ಮತ್ತು ಕೊಡುಕೊಳ್ಳುವಿಕೆಯ ತತ್ವಗಳನ್ನು ‘ಸಾಮಾಜಿಕ ಬಂಡವಾಳ’ ಎನ್ನಬಹುದು.
ಮಾತ್ರವಲ್ಲದೆ ನಮ್ಮ ನಡುವಿನ ವ್ಯವಸ್ಥೆ, ಸಂಬಂಧಗಳು ಮತ್ತು ಸಮಾಜದ ಸಾಮಾಜಿಕ ಪರಿಣಾಮದ ಗುಣಮಟ್ಟ ಹಾಗೂ ಪ್ರಮಾಣಕ್ಕೆ ರೂಪ ಕೊಡುವ ನಿಯಮಗಳನ್ನೂ ಸಾಮಾಜಿಕ ಬಂಡವಾಳಎನ್ನಬಹುದು.

‘ಸಾಮಾಜಿಕ ಬಂಡವಾಳ’ ಎಂದರೆ ಸಮಾಜದ ಆಧಾರವಾಗಿರುವ ವ್ಯವಸ್ಥೆಗಳು ಮಾತ್ರವಲ್ಲ, ಅದು ಸಮಾಜ ಮತ್ತು ಸಂಸ್ಥೆಗಳನ್ನು ಪರಸ್ಪರ ಬಿಗಿಯಾಗಿ ಜೋಡಿಸುವ ಅಂಟು ಕೂಡ ಹೌದು.

🔘 ಸುಸ್ಥಿರವಾದ ಅಭಿವೃದ್ಧಿ ಎಂದರೇನು?

ನಾವು ಮತ್ತು ನಮ್ಮ ಮುಂದಿನ ಪೀಳಿಗೆಗಳು ನೆಮ್ಮದಿಯಿಂದ ಬದುಕಬೇಕೆಂದರೆ, ಜನರ ಅಗತ್ಯಗಳನ್ನು ಪೂರೈಸುವ, ಸ್ವಾವಲಂಬನೆಯನ್ನು ಉತ್ತೇಜಿಸುವ ಮತ್ತು ನಮ್ಮ ಮೂಲಭೂತ ಬೇಡಿಕೆಗಳನ್ನು ನಿರಂತರವಾಗಿ ಪೂರೈಸುವಂತಹ ವ್ಯವಸ್ಥೆ ಕಲ್ಪಿಸುವುದು ಸೂಕ್ತವಾದ ಅಭಿವೃದ್ಧಿಯ  ಮಾದರಿ. ಅದೇ ಸುಸ್ಥಿರ ಅಭಿವೃದ್ಧಿ.

ಇಂತಹ ಮಾದರಿ ನಮ್ಮ ಪರಿಸರದ ಅಂಶಗಳನ್ನು ಪರಿಗಣಿಸುವ ಆರ್ಥಿಕ ಅಭಿವೃದ್ಧಿ ಕೂಡ.ಅಂದರೆ ಪರಿಸರಕ್ಕೆ ಪೂರಕವಾದ ಅಂತಹ ಅಭಿವೃದ್ಧಿ­ದೀರ್ಘ­­ಕಾಲಿಕವಾಗಿರುತ್ತದೆ ಮತ್ತು ದಕ್ಷವಾಗಿರುತ್ತದೆ.
ಇದು ಮಾನವ ಸಮಾಜ ಬದುಕುವ ಸೃಜನಶೀಲ ಮಾರ್ಗ ಕೂಡ.