Tuesday, 1 November 2016

ಇತಿಹಾಸ

1.ಈ ಕೆಳಗಿನವುಗಳಲ್ಲಿ ಯಾವುದು ಚಾಲುಕ್ಯರು ಹರ್ಷನ ವಿರುದ್ಧ ಸಾಧಿಸಿದ ವಿಜಯವನ್ನು ಉಲ್ಲೇಖಿಸುತ್ತದೆ?
ಎ.ಐಹೊಳೆ ಪ್ರಶಸ್ತಿ
ಬಿ.ಅರಬ್ ಪ್ರವಾಸಿಗಳ ವಿವರಣೆ
ಸಿ.ಹರ್ಷಚರಿತ
ಡಿ.ವಿಕ್ರಮಾಂಕದೇವಚರಿತ
A##
ಉತ್ತರಾಪಥೆಶ್ವರನಾದ ಹರ್ಷವರ್ಧನ ಮತ್ತು ಧಕ್ಷಿಣಾಪಥೇಶ್ವರನಾದ ಇಮ್ಮುಡಿ ಪುಲಿಕೇಶಿ ನಡುವೆ ನರ್ಮದಾ ನದಿಯ ದಡದ ಮೇಲೆ ನಡೆದಂತಹ ಈ ಕದನದಲ್ಲಿ ಇಮ್ಮುಡಿ ಪುಲಿಕೇಶಿಗೆ ಜಯವಾಯಿತು ಎಂದು ತಿಳಿಸುವ ಶಾಸನ ಐಹೊಳೆ ಶಾಸನ .ಇದನ್ನು ಹೊರಡಿಸಿದವರು ರವಿಕೀರ್ತಿ.
2.ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
ಎ.ಅಲಹಾಬಾದ್ ಸ್ತಂಬಶಾಸನ. ಸಮುದ್ರ ಗುಪ್ತ
ಬಿ.ಐಹೊಳೆ ಶಾಸನ. ಇಮ್ಮುಡಿ ಪುಲಿಕೇಶಿ
ಸಿ.ಮಸ್ಕಿ ಶಾಸನ. ಅಶೋಕನ ಕಳಿಂಗ ಯುದ್ಧ
ಡಿ.ಉತ್ತರ ಮೇರೂರು ಶಾಸನ. ಚೋಳರ ಆಡಳಿತ ವ್ಯವಸ್ಥೆ
C##
3.ಬಾದಾಮಿಯ ಗುಹಾಂತರ ದೇವಾಲಯಗಳನ್ನು ಕಟ್ಟಿಸಿದವರು
ಎ.ಚೋಳರು
ಬಿ.ಚಾಲುಕ್ಯರು
ಸಿ.ಹೊಯ್ಸಳರು
ಡಿ.ರಾಷ್ಟ್ರಕೂಟರು
B##
4.ಸಾಮ್ರಾಟ ಹರ್ಷನ ದಕ್ಷಿಣದ ದಂಡ ಯಾತ್ರೆಯನ್ನು ನರ್ಮದಾ ನದಿ ತೀರದ ಮೇಲೆ ತಡೆದವ.
ಎ.ಒಂದನೇ ಪುಲಿಕೇಶಿ
ಬಿ.ಎರಡನೇ ಪುಲಿಕೇಶಿ
ಸಿ.ಒಂದನೇ ವಿಕ್ರಮಾದಿತ್ಯ
ಡಿ.ಎರಡನೇ ವಿಕ್ರಮಾದಿತ್ಯ
B##
5.ಐಹೊಳೆ ಶಾಸನವನ್ನು ಬರೆಸಿದ ಚಾಲುಕ್ಯ ಅಸರ ಯಾರು?
ಎ.ಕೀರ್ತಿ ವರ್ಮ
ಬಿ.ಮಂಗಳೇಶ
ಸಿ.1 ನೇ ಪುಲಿಕೇಶಿ
ಡಿ‌.2 ನೇ ಪುಲಿಕೇಶಿ
D##
6.ಇಮ್ಮಡಿ ಪುಲಿಕೇಶಿಯನ್ನ ಸೋಲಿಸಿದ ಪಲ್ಲವ ದೊರೆ ಯಾರು?
ಎ.1ನೇ ಸರಸಿಂಹ ವರ್ಮ
ಬಿ.2ನೇ ನರಸಿಂಹ ವರ್ಮ
ಸಿ.1ನೇ ಮಹೇಂದ್ರ ವರ್ಮ
ಡಿ.ನಂದಿ ವರ್ಮ
A##
7.ಶಾಸನಗಳಲ್ಲಿ ಬಾದಾಮಿ ಚಾಲುಕ್ಯರ ಸೇನೆಯನ್ನು ಏನೆಂದು ವರ್ಣಿಸಲಾಗಿದೆ?
ಎ.ಕರ್ನಾಟಕದ ಸೇನೆ
ಬಿ.ಕರ್ನಾಟಕ ಗಜ
ಸಿ.ಕರ್ನಾಟಕ ಬಲ
ಡಿ.ಕರ್ನಾಟಕ ಸಿಂಹ
C##
8.ಪಲ್ಲವರಿಂದ ಬಾದಾಮಿಯನ್ನು ಮರಳಿ ಪಡೆದು ಸಾಮ್ರಾಜ್ಯವನ್ನು ಪುನಃ ಸಂಪಾದಿಸಿದ ಚಾಲುಕ್ಯ ದೊರೆ ಯಾರು?
ಎ.ವಿನಯಾದಿತ್ಯ
ಬಿ.2ನೇ ವಿಕ್ರಮಾದಿತ್ಯ
ಸಿ.ವಿಜಯಾದಿತ್ಯ
ಡಿ.1ನೇ ವಿಕ್ರಮಾದಿತ್ಯ
D##
ಪಲ್ಲವರ ಅರಸ 1ನೇ ನರಸಿಂಹ ವರ್ಮನನ್ನು ಕೊಲೆ ಮಾಡಿ,ಬಾದಾಮಿಯನ್ನು ಪಡೆದುಕೊಂಡಿದ್ದಕಾಗಿ ಇವನನ್ನು ಬಾದಾಮಿ ಚಾಲುಕ್ಯರ ಪುನರ್ ಸ್ಥಾಪಕ ಎನ್ನುವರು.
9.ಎರಡನೇ ವಿಕ್ರಮಾದಿತ್ಯನ ರಾಣಿಯಾದ ಲೋಕ ಮಹಾದೇವಿ ಕಟ್ಟಿಸಿದ ದೇವಾಲಯ ಯಾವುದು?
ಎ.ಪಾಪನಾಥ
ಬಿ‌.ಪಾರ್ಶ್ವನಾಥ
ಸಿ.ವಿರೂಪಾಕ್ಷ
ಡಿ‌.ಲಡಖಾನ್
C##
ಕಲ್ಯಾಣದ ಕಲಚೂರಿ ಮನೆತನದ ರಾಜಕುಮಾರಿ ಲೋಕಮಹಾದೇವಿ ಯನ್ನು ಮದುವೆಯಾಗಿದ್ದನು.ಅವಳು ಪಟ್ಟದಕಲ್ಲಿನಲ್ಲಿ ಲೋಕೇಶ್ವರ(ವಿರೂಪಾಕ್ಷ) ದೇವಾಲಯ ನಿರ್ಮಿಸಿದಳು.
10.ಹರ್ಷವರ್ಧನನ ಮೇಲಿನ ವಿಜಯದ ಸಂಕೇತವಾಗಿ ಇಮ್ಮುಡಿ ಪುಲಿಕೇಶಿ ಧರಿಸಿದ ಬಿರುದು ಯಾವುದು?
ಎ.ಉತ್ತರ ಪಥೇಶ್ವರ
ಬಿ.ಪರಮೇಶ್ವರ
ಸಿ.ಕಲಿವಲ್ಲಭ
ಡಿ.ಪೃಥ್ವಿವಲ್ಲಭ
B##
ಉತ್ತರಾಪಥೆಶ್ವರನಾದ ಹರ್ಷವರ್ಧನ ಮತ್ತು ಧಕ್ಷಿಣಾಪಥೇಶ್ವರನಾದ ಇಮ್ಮುಡಿ ಪುಲಿಕೇಶಿ ನಡುವೆ ನರ್ಮದಾ ನದಿಯ ದಡದ ಮೇಲೆ ನಡೆದಂತಹ ಈ ಕದನದಲ್ಲಿ ಇಮ್ಮುಡಿ ಪುಲಿಕೇಶಿಗೆ ಜಯವಾಯಿತು.ಈ ಕದನದಲ್ಲಿ ಗೆದ್ದಂತಹ ಪುಲಿಕೇಶಿ ಪರಮೇಶ್ವರ ಎಂಬ ಬಿರುದು ಬಂತು.
11.ಪಟ್ಟದಕಲ್ಲಿನ ಯಾವ ದೇವಾಲಯವನ್ನು ಪರ್ಶಿಬ್ರೌನರು ದ್ರಾವಿಡ ಶಿಲ್ಪದ ಶ್ರೇಷ್ಠ ಕೃತಿ ಎಂದು ವರ್ಣಿಸಿದ್ದಾರೆ?
ಎ.ಸಂಗಮೇಶ್ವರ
ಬಿ.ಗಳಗನಾಥೆಶ್ವರ
ಸಿ.ವಿರೂಪಾಕ್ಷ
ಡಿ.ಲಡಖಾನ
C##
12.ಬಾದಾಮಿ ಚಾಲುಕ್ಯರ ಕಾಲದಲ್ಲಿ ಬೆಳವಣಿಗೆಗೊಂಡ ಮಿಶ್ರ ಕಲಾ ಶೈಲಿ ಯಾವುದು?
ಎ‌.ದ್ರಾವಿಡ
ಬಿ.ವೇಸರ
ಸಿ.ನಾಗರ
ಡಿ.ಮಥುರಾ
B##
13.ನಾಟ್ಯ ಸರಸ್ವತಿ ಎಂದು ಹೆಸರುವಾಸಿಯಾಗಿದ್ದ ವಿಷ್ಣುವರ್ಧನನ ರಾಣಿ ಯಾರು?
ಎ.ಬೊಮ್ಮಲಾದೇವಿ
ಬಿ.ಚಾಂದಲಾದೇವಿ
ಸಿ.ಶಾಂತಲಾದೇವಿ
ಡಿ.ಕೇತಲಾದೇವಿ
C##
ವಿಷ್ಣುವರ್ಧನನ ಪಟ್ಟದರಸಿ ನಾಟ್ಯ ರಾಣಿ ಶಾಂತಲೆಯು ನೃತ್ಯದಲ್ಲಿ ಪರಿಣಿತಿ ಹೊಂದಿದ್ದಕಾಗಿ ನಾಟ್ಯ ಸರಸ್ವತಿ ಎಂದು ಕರೆಯಲಾಗುತ್ತಿತ್ತು.
14.ಅಭಿನಯ ಸರಸ್ವತಿ ಎಂದು ಹೆಸರಾಗಿದ್ದ 6ನೇ ವಿಕ್ರಮಾದಿತ್ಯನ ರಾಣಿ ಯಾರು?
ಎ.ತ್ರೈಲೋಕ್ಯ ಮಹಾದೇವಿ
ಬಿ.ಚಂದಲಾದೇವಿ
ಸಿ.ದೇವಲಾದೇವಿ
ಡಿ.ವಿಜಯ ಭಟ್ಟರಿಕೆ
B##
15.ಯಾರ ಪ್ರಭಾವದಿಂದ ಬಿಟ್ಟಿದೇವನು ಶ್ರೀ ವೈಷ್ಣವ ಧರ್ಮವನ್ನು ಸ್ವೀಕರಿಸಿ ವಿಷ್ಣುವರ್ಧನನಾದ?
ಎ.ಮಧ್ವಾಚಾರ್ಯ
ಬಿ.ರಾಮಾನುಜ
ಸಿ.ಶಂಕರ
ಡಿ.ರಮಾನಂದ
B##
16.ಸೊಸೆವೂರ ಅಥವಾ ಶಶಾಕಪುರದಿಂದ ದ್ವಾರಸಮುದ್ರಕ್ಕೆ ರಾಜಧಾನಿಯನ್ನು ವರ್ಗಾಯಿಸಿದ ಹೊಯ್ಸಳ ರಾಜ ಯಾರು?
ಎ.ನೃಪಕಾಮ
ಬಿ.ವಿಷ್ಣುವರ್ಧನ
ಸಿ.ವಿನಯಾದಿತ್ಯ
ಡಿ.ನರಸಿಂಹ
C##
17.ಅಭಿನವ ಪಂಪ ಎಂದು ಹೆಸರಾದ ನಾಗಚಂದ್ರನು ಯಾವ ಹೊಯ್ಸಳ ದೊರೆಯ ಆಸ್ಥಾನ ಕವಿಯಾಗಿದ್ದನು.
ಎ.ಒಂದನೇ ಬಲ್ಲಾಳ
ಬಿ.ಇಮ್ಮಡಿ ಬಲ್ಲಾಳ
ಸಿ.ಮೂರನೇ ಬಲ್ಲಾಳ
ಡಿ.ಇಮ್ಮಡಿ ನರಸಿಂಹ
A##
18.ಹೊಯ್ಸಳ ವಿಷ್ಣುವರ್ಧನನು ಯಾರನ್ನು ಸೋಲಿಸಿ ತಲಕಾಡುಗೊಂಡ ಮತ್ತು ವೀರಗಂಗ ಎಂಬ ಬಿರುದು ಧರಿಸಿದನು?
ಎ.ಕಲ್ಯಾಣಿ ಚಾಲುಕ್ಯರ
ಬಿ.ಚೋಳರು
ಸಿ.ಪಲ್ಲವರು
ಡಿ.ಗಂಗರು
B##
19.ವಿಷ್ಣುವರ್ಧನನ ಕಾಲವನ್ನು ಯಾವ ಮೊಘಲ್ ಚಕ್ರವರ್ತಿಯ ಕಾಲಕ್ಕೆ ಹೋಲಿಸಲಾಗಿದೆ?
ಎ.ಜಹಾಂಗೀರ್
ಬಿ.ಬಾಬರ್
ಸಿ.ಅಕ್ಬರ್
ಡಿ.ಷಹಜಹಾನ್
D##
20.ಇಟಲಿಯ ಪ್ರವಾಸಿಗ ನಿಕಲೋಕಾಂಟಿಯು ಯಾರ ಕಾಲದಲ್ಲಿ ವಿಜಯನಗರಕ್ಕೆ ಬೇಟಿಕೊಟ್ಟಿದ್ದನು?
ಎ‌.1ನೇ ಹರಿಹರ
ಬಿ‌.2ನೇ ಹರಿಹರ
ಸಿ.1ನೇ ದೇವರಾಯ
ಡಿ.2ನೇ ದೇವರಾಯ
C##
21.ವಿಜಯನಗರದ ಬಗ್ಗೆ ಮೊದಲ ಅಧಿಕೃತ ಇತಿಹಾಸವಾದ 'ಮರೆತು ಹೋದ ಸಾಮ್ರಾಜ್ಯ' ಎಂಬ ಗ್ರಂಥವನ್ನು ಬರೆದವರು
ಎ.ಇಬನ್ ಬಟೂಟ್
ಬಿ.ರಾಬರ್ಟ ಹುಕ್
ಸಿ.ರಾಬರ್ಟ್ ಸಿವೆಲ್
ಡಿ. ನಿಕಲೋಕಾಂಟಿ
C##
22.ಹಂಪಿಯಲ್ಲಿನ ಹಜಾರ ರಾಮದೇವಾಲಯದ ನಿರ್ಮಾಣವಾದುದು ಯಾರ ಆಳ್ವಿಕೆಯ ಕಾಲದಲ್ಲಿ?
ಎ.ಅಚ್ಯುತರಾಯನ ಕಾಲದಲ್ಲಿ
ಬಿ.ಕೃಷ್ಣದೇವರಾಯನ ಕಾಲದಲ್ಲಿ
ಸಿ.ರಾಮರಾಯನ ಕಾಲದಲ್ಲಿ
ಡಿ.ವೆಂಕಟರಾಯನ ಕಾಲದಲ್ಲಿ
B##
23.ವಿಜಯನಗರ ಸಾಮ್ರಾಜ್ಯಕ್ಕೆ ರೇಷ್ಮೆ ಎಲ್ಲಿಂದ ಆಮದಾಗುತ್ತಿತ್ತು?
ಎ.ಚೀನಾ
ಬಿ.ಟರ್ಕಿ
ಸಿ.ಅರೇಬಿಯಾ
ಡಿ.ಜಪಾನ್
A##

No comments:

Post a Comment