Sunday 20 August 2017

ಗ್ರಹಣಗಳು

ಸೂರ್ಯ ಹಗಲಿನಲ್ಲಿಯೂ ಚ೦ದ್ರ ಕೆಲವೊಮ್ಮೆ ಹಗಲಿನಲ್ಲಿಯೂ ಕೆಲವೊಮ್ಮೆ ರಾತ್ರಿಯಲ್ಲಿಯೂ ಕಾಣುವನು. ಸೂರ್ಯ ಚ೦ದ್ರ ಮರೆಯಾಗುವ ಕಾರ್ಯಕ್ಕೆ ಗ್ರಹಣ ಎನ್ನುತ್ತಾರೆ. ಸಾಮಾನ್ಯವಾಗಿ ಗ್ರಹಣಗಳನ್ನು ಭಯಪೂರಿತ ಮನಸ್ಸಿನಿ೦ದಲೇ ಬರಮಾಡಿಕೊಳ್ಳಲಾಗುತ್ತಿದೆ. ಆದರೆ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸತ್ಯಾನ್ವೇಷಕರು ಮಾತ್ರ ಇ೦ತಹ ಗ್ರಹಣಗಳನ್ನು ನಿರೀಕ್ಷಿಸುತ್ತಲೇ ಇರುತ್ತಾರೆ. ಏಕೆ೦ದರೆ ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅವರಿಗೊ೦ದು ಅತ್ಯ೦ತ ವಿರಳ ಅವಕಾಶವನ್ನು ಒದಗಿಸುತ್ತದೆ.

ಚ೦ದ್ರಗ್ರಹಣ ಸೂರ್ಯ ಮತ್ತು ಚ೦ದ್ರರ ನಡುವೆ ಸರಳರೇಖೆಯಲ್ಲಿ ಭೂಮಿ ಬ೦ದು, ಭೂಮಿಯ ಛಾಯೆಯು ಚ೦ದ್ರನ ಮೇಲೆ ಬೀಳುವ ಸ೦ದರ್ಭವೇ ಚ೦ದ್ರಗಹಣ. ಚ೦ದ್ರನ ಮೇಲೆ ಬೀಳುವ ಭೂಮಿಯ ಛಾಯೆಯನ್ನು ಭೂಮಿಯ ಮೇಲಿರುವ ನಾವು ನೋಡಲು ನಾವಿರುವ ಭೂಭಾಗ ಚ೦ದ್ರನ ಕಡೆಗಿರಬೇಕು ಹಾಗೂ ನಮಗೆ ಕಾಣುತ್ತಿರುವ ಚ೦ದ್ರನ ಭಾಗ ಸೂರ್ಯನ ಕಡೆಗಿರಬೇಕು. ಇದು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಾಧ್ಯ. ಭೂಮಿಯ ಛಾಯೆ ಚ೦ದ್ರನ ಮೇಲೆ ಬಿದ್ದಾಗ ಚ೦ದ್ರನು ಸ೦ಪೂರ್ಣವಾಗಿ ಮರೆಯಾದರೆ ಅದು ಪೂರ್ಣ ಚ೦ದ್ರಗ್ರಹಣ ಸನ್ನಿವೇಶ. ಚ೦ದ್ರನ ಸ್ವಲ್ಪ ಭಾಗ ಮರೆಯಾದರೆ ಅದು ಭಾಗಶಃ ಚ೦ದ್ರಗಹಣ. ಸೂರ್ಯಗ್ರಹಣ ಸೂರ್ಯ ಮತ್ತು ಭೂಮಿಯ ನಡುವೆ ಚ೦ದ್ರ ಬ೦ದು ಸೂರ್ಯನು ಕೆಲಕಾಲ ಮರೆಯಾಗುವ ಸನ್ನಿವೇಶವೇ ಸೂರ್ಯಗ್ರಹಣ. ಚ೦ದ್ರನ ಛಾಯೆ ಭೂಮಿಯ ಮೇಲೆ ಬಿದ್ದು, ಛಾಯೆ ಬೀಳುವ ಭೂಭಾಗದಲ್ಲಿ ನಾವು ಇದ್ದಾಗ ಮಾತ್ರ ಸೂರ್ಯಗ್ರಹಣ ಗೋಚರಿಸುತ್ತದೆ. ಸೂರ್ಯನು ಸ೦ಪೂರ್ಣವಾಗಿ ಮರೆ ಮಾಡಲ್ಪಟ್ಟರೆ ಅದು ಪೂರ್ಣ ಸೂರ್ಯಗ್ರಹಣ. ಸೂರ್ಯನ ಸ್ವಲ್ಪ ಭಾಗ ಮಾತ್ರ ಮರೆ ಮಾಡಲ್ಪಟ್ಟರೆ ಅದು ಭಾಗಶಃ ಸೂರ್ಯಗ್ರಹಣ.ಕೆಲವು ಅಮವಾಸ್ಯೆಗಳ ಸೂರ್ಯ, ಚ೦ದ್ರ ಮತ್ತು ಭೂಮಿ ಒ೦ದೇ ಸರಳರೇಖೆಯಲ್ಲಿ ಬರುತ್ತವೆ. ಆಗೂ ಸೂರ್ಯಗ್ರಹಣ ಸ೦ಭವಿಸುತ್ತದೆ. ಸೂರ್ಯಗ್ರಹಣದಲ್ಲಿ ನಾಲ್ಕು ವಿಧಗಳಿವೆ. ಅವುಗಳೆ೦ದರೆ, ೧. ಪೂರ್ಣ ಸೂರ್ಯಗ್ರಹಣ ೨. ಭಾಗಶಃ ಸೂರ್ಯಗ್ರಹಣ ೩. ಕ೦ಕಣ ಸೂರ್ಯಗ್ರಹಣ ೪. ಸ೦ಕರ ಸೂರ್ಯಗ್ರಹಣ

ಗ್ರಹಣಗಳ ವಿಧ

ಪಾತರೇಖೆಯ ವಿನ್ಯಾಸವನ್ನು ಅನುಸರಿಸಿ ಗ್ರಹಣವನ್ನು ವಿಭಾಗಿಸಬಹುದು.

    ಅರೆನೆರಳಿನ ಗ್ರಹಣ : ಭೂಮಿಯ ದಟ್ಟ ನೆರಳಿನ ಭಾಗವನ್ನು ಮುಟ್ಟದೆಯೇ ಚಂದ್ರ ಹೊರಗೆ ಬರುವುದು.
    ಪಾರ್ಶ್ವಗ್ರಹಣ: ಅರೆ ನೆರಳಿನ ಮೂಲಕ ಹೋಗಿ ದಟ್ಟ ನೆರಳಿನ ಕೆಲ ಭಾಗವನ್ನು ಹಾದು ಹೊರಕ್ಕೆ ಬರುವುದು.

    ಪೂರ್ಣಗ್ರಹಣ : ದಟ್ಟ ನೆರಳಿನ ಮಧ್ಯೆ ಅಥವಾ ಅಂಚಿನಲ್ಲಿ ಪೂರ್ತಿ ಮುಳುಗಿ ಹೊರಗೆ ಬರುವುದು.

ದಟ್ಟ ನೆರಳಿನ ಮಧ್ಯೆ ನೇರ ಹಾದು ಹೋಗುವಾಗ ಚಂದ್ರಗ್ರಹಣ ಕಾಣಿಸುವ ಗರಿಷ್ಠ ಕಾಲಾವಧಿ ಸುಮಾರು 2 ಗಂಟೆಗಳು. ದಟ್ಟ ನೆರಳಿನ ಸುತ್ತ ಆವರಿಸಿರುವ ಅರೆ ನೆರಳಿನ ಭಾಗವನ್ನೂ ಗಣನೆಗೆ ತೆಗೆದುಕೊಂಡರೆ ಗ್ರಹಣದ ಗರಿಷ್ಠ ಕಾಲಾವಧಿ ಸುಮಾರು 4 ಗಂಟೆಗಳು. ಆದ್ದರಿಂದ ಚಂದ್ರಗ್ರಹಣವನ್ನು ಬಹಳ ಹೊತ್ತು ನೋಡವುದಕ್ಕಾಗುತ್ತದೆ. ಯಾವುದಾದರೂ ಒಂದು ವರ್ಷದಲ್ಲಾಗುವ ಒಟ್ಟು ಚಂದ್ರಗ್ರಹಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಅದರಲ್ಲಿ ಪೂರ್ಣ ಚಂದ್ರಗ್ರಹಣಗಳೇ ಹೆಚ್ಚಾಗಿ ಆಗುತ್ತವೆ. ಪೂರ್ಣ ಚಂದ್ರಗ್ರಹಣವಾದ ಕೆಲವು ಸಂದರ್ಭಗಳಲ್ಲಿ ಗ್ರಹಣವಾದ ಚಂದ್ರನ ಮೇಲ್ಮೈ ಹೊಳಪಿನಿಂದ ಇರಬೇಕಾಗಿದ್ದುದು ಭೂಮಿಯ ಮೇಲಾದ ವಿಪ್ಲವದಿಂದ ಮಂಕಾಗಿ ಕಂಡುದೂ ಉಂಟು. 1884ರ ಅಕ್ಟೋಬರ್ 4ರಲ್ಲಿ ಚಂದ್ರಗ್ರಹಣವಾದಾಗ ಜ್ವಾಲಾಮುಖಿ ಒಗೆದ ದೂಳು ಮತ್ತು ಬೂದಿಯಿಂದ ಭೂಮಿಯ ವಾತಾವರಣ ಆವರಿಸಲ್ಪಟ್ಟಿದ್ದರಿಂದ ಚಂದ್ರನ ಮೇಲೆ ಗ್ರಹಣ ಕಾಲದಲ್ಲಿ ಬಹಳ ಕತ್ತಲು ಮೂಡಿತ್ತು. ಇದೇ ರೀತಿಯಲ್ಲಿ 1902, 1913 ಮತ್ತು 1950 ರಲ್ಲೂ ಆಯಿತು.

ಭೂಮಿ ಮತ್ತು ಚಂದ್ರನ ನಡುವೆ ಸರಾಸರಿ ದೂರವು 384,399 ಕಿ.ಮೀ.ಗಳು. ಈ ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು 1.3 ಕ್ಷಣಗಳು ಹಿಡಿಯುತ್ತದೆ.

ಚಂದ್ರನ ವ್ಯಾಸವು 3,474 ಕಿ.ಮೀ.ಗಳಿದ್ದು (2,159 ಮೈಲಿಗಳು),[೧] (ಭೂಮಿಗಿಂತ ೩.೭ ಪಟ್ಟು ಕಡಿಮೆ), ಇದು ಸೌರಮಂಡಲದ ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರಿಯಾದ ಉಪಗ್ರಹವಾಗಿದೆ. ಗ್ಯಾನಿಮಿಡ್, ಟೈಟನ್, ಕ್ಯಾಲಿಸ್ಟೊ, ಮತ್ತು ಐಓಗಳು ಚಂದ್ರನಿಗಿಂತ ದೊಡ್ಡದಾಗಿವೆ. ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ. ಚಂದ್ರವು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ-ಚಂದ್ರ-ಸೂರ್ಯ ವ್ಯವಸ್ಥೆಯಲ್ಲಿ ಆವರ್ತಿಸುವ ಬದಲಾವಣೆಗಳ ಕಾರಣದಿಂದ ಚಂದ್ರನ ಕಲೆಗಳು ಉಂಟಾಗುತ್ತವೆ. ಈ ಪಕ್ಷಗಳು ೨೯.೫ ದಿನಗಳಿಗೊಮ್ಮೆ ಆವರ್ತಿಸುತ್ತವೆ.

ಭೂಮಿಯನ್ನುಳಿದು ಮಾನವರು ನಡೆದಾಡಿರುವ ಏಕೈಕ ಆಕಾಶಕಾಯವೆಂದರೆ ಚಂದ್ರ. ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯೆಂದರೆ ರಷ್ಯಾದ ಲೂನ ಕಾರ್ಯಕ್ರಮದ ನೌಕೆ. ಲೂನಾ ೧ ಭೂಮಿಯ ಗುರುತ್ವದಿಂದ ಮುಕ್ತಿ ಪಡೆದು ಚಂದ್ರನ ಬಳಿ ಹಾರಿಹೋದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಲೂನಾ ೨ ಚಂದ್ರನ ಮೇಲ್ಮೈ ತಲುಪಿದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಸಾಮಾನ್ಯವಾಗಿ ಮರೆಯಾಗಿರುವ ಚಂದ್ರನ ಹಿಮ್ಮುಖವನ್ನು ಲೂನಾ ೩ ಚಿತ್ರೀಕರಿಸಿತು. ಈ ೩ ಘಟನೆಗಳೂ ೧೯೫೯ರಲ್ಲಿ ಆದವು. ಚಂದ್ರನ ಮೇಲೆ ನಿಧಾನವಾಗಿ ಇಳಿದ ಪ್ರಪ್ರಥಮ ನೌಕೆ ಲೂನಾ ೯ ಮತ್ತು ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ನೌಕೆ ಲೂನಾ ೧೦. ಇವೆರಡೂ ೧೯೬೬ರಲ್ಲಿ ನಡೆದವು.[೧] ಅಮೇರಿಕಾ ಸಂಯುಕ್ತ ಸಂಸ್ಥಾನದ ಅಪೋಲೋ ಕಾರ್ಯಕ್ರಮದ ಭಾಗವಾಗಿ, ಚಂದ್ರನತ್ತ ಮೊದಲಬಾರಿಗೆ ಮತ್ತು ಏಕಮಾತ್ರ ಮಾನವ ಸಹಿತ ಯಾನವು ಯಶಸ್ವಿಯಾಗಿ ಪೂರ್ಣಗೊಂಡಿತು. ಚಂದ್ರವನ್ನು ಪರಿಭ್ರಮಿಸಿದ ಮೊದಲ ಮಾನವ ಸಹಿತ ಯಾನವಾದ ಅಪೋಲೋ ೧೯೬೮ರಲ್ಲಿ ಮತ್ತು ಚಂದ್ರನ ಮೇಲೆ ಮಾನವರನ್ನು ತಲುಪಿಸಿದ ಅಪೋಲೋ ೧೧ ೧೯೬೯ರಲ್ಲಿ ಪೂರ್ಣಗೊಂಡವು.[೧]

ಅಪೋಲೋ ಕಾರ್ಯಕ್ರಮದ ಸಮಾಪ್ತಿಯೊಂದಿಗೆ ಮಾನವಸಹಿತ ಚಂದ್ರಾನ್ವೇಷಣೆಯು ಕೊನೆಗೊಂಡರೂ, ಭವಿಷ್ಯದಲ್ಲಿ ಚಂದ್ರನತ್ತ ಮಾನವ ರಹಿತ/ಸಹಿತ ಗಗನನೌಕೆಗಳನ್ನು ಕಳುಹಿಸುವ ಯೋಜನೆಗಳನ್ನು ಹಲವು ದೇಶಗಳು ಹೊಂದಿವೆ. ಮಂಗಳ ಗ್ರಹದ ಯಾತ್ರೆಯ ತಯಾರಿಕೆಗಾಗಿ ಚಂದ್ರನ ಮೇಲೆ ಒಂದು ಶಾಶ್ವತ ನೆಲೆಯನ್ನು ಸ್ಥಾಪಿಸುವ ಉದ್ದೇಶವನ್ನು ಡಿಸೆಂಬರ್ ೪, ೨೦೦೬ರಂದು ನಾಸಾ ಸೂಚಿಸಿತು. ಈ ನೆಲೆಯ ನಿರ್ಮಾಣ ಕಾರ್ಯಕ್ಕೆ ಸುಮಾರು ೫ ವರ್ಷಗಳು ತಗಲುವ ನಿರೀಕ್ಷೆಯಿದೆ. ಇದರ ನಂತರ ೨೦೨೦ರಲ್ಲಿ ಮೊದಲ ಯಾನಗಳು ಆರಂಭವಾಗುವ ನಿರೀಕ್ಷೆಯಿದೆ.

No comments:

Post a Comment