Sunday, 9 August 2015

ಬ್ಯಾಂಕುಗಳು

"ಬ್ಯಾಂಕ್" ಎಂಬ ಶಬ್ದ ಇಟಾಲಿಯನ್ ಭಾಷೆಯ "ಬ್ಯಾಂಕೊ" ಎಂಬ ಶಬ್ದದಿಂದ ಬಂದಿದೆ.
ಬ್ಯಾಂಕೊ ಎಂದರೆ ಬೆಂಚು ಎಂದರ್ಥ.

ಮಧ್ಯಯುಗದಲ್ಲಿ ಇಟಾಲಿಯನ್ನರು ಬೆಂಚಿನ ಮೇಲೆ ಕುಳಿತು ತಮ್ಮ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿದ್ದರು. ಅನಂತರ ಈ ಶಬ್ದ ಬದಲಾವಣೆ ಹೊಂದಿ ಬ್ಯಾಂಕ್ ಆಯಿತು.
ಈಗ ಎಲ್ಲ ದೇಶಗಳಲ್ಲೂ ಬ್ಯಾಂಕುಗಳಿವೆ. ಬ್ಯಾಂಕುಗಳು ಎರಡು ಮುಖ್ಯ ಕೆಲಸಗಳನ್ನು ನಿರ್ವಹಿಸುತ್ತವೆ.
* ಮೊದಲನೆಯದಾಗಿ ಜನರಿಂದ ಠೇವಣಿಗಳನ್ನು ಸಂಗ್ರಹಿಸುತ್ತವೆ ಮತ್ತು
* ಎರಡನೆಯದಾಗಿ ಅಗತ್ಯವುಳ್ಳವರಿಗೆ ಬಡ್ಡಿಯ ಆಧಾರದ ಮೇಲೆ ಹಣವನ್ನು ಸಾಲವಾಗಿ ಕೊಡುತ್ತವೆ.
ಬೇರೆ ಬೇರೆ ವ್ಯವಹಾರ ಮತ್ತು ಉದ್ಯಮಗಳನ್ನು ಹೊಂದಿರುವ ಜನರಿಗೆ ಸಹಾಯ ಮಾಡುವುದು ಬ್ಯಾಂಕಿನ ಕೆಲಸ.
ಆಧುನಿಕ ಬ್ಯಾಂಕಿಗ್ ಪದ್ಧತಿ, 1987ರಲ್ಲಿ ವೆನಿಸ್ನಲ್ಲಿ ಆರಂಭವಾಯಿತು. ಆ ವರ್ಷ "ಬ್ಯಾಂಕೊ ಡಿ ರಿಯಾಲ್ಟೊ" (Banco de Rialto) ವನ್ನು ಸ್ಥಾಪಿಸಲಾಯಿತು. ಜನರು ಈ ಬ್ಯಾಂಕಿನಲ್ಲಿ ಹಣ ಇಡುತ್ತಿದ್ದರು ಮತ್ತು ತಮಗೆ ಬೇಕಾದಾಗ ಹಣವನ್ನು ತೆಗೆದುಕೊಳ್ಳುತ್ತಿದ್ದರು. 1916ರಲ್ಲಿ ಈ ಬ್ಯಾಂಕಿನ ಆಡಳಿತವನ್ನು "ಬ್ಯಾಂಕೊ ಡಿ ಗಿರೊ" (Banco de giro) ವಹಿಸಿಕೊಂಡಿತು. ಜನರು ಬ್ಯಾಂಕ್ನಲ್ಲಿ ಬೆಳ್ಳಿ ಮತ್ತು ಚಿನ್ನದ ವಸ್ತುಗಳನ್ನು ಸಹ ಇತ್ತು ರಶೀದಿಗಳನ್ನು ಪಡೆಯುತ್ತಿದ್ದರು. ಈ ರಶೀದಿಗಳನ್ನು ಕರೆನ್ಸೀ ನೋಟುಗಳಾಗಿ ಉಪಯೋಗಿಸಲಾಗುತ್ತಿತ್ತು.
* ಅಮೇರಿಕದಲ್ಲಿ ಮೊಟ್ಟಮೊದಲ ಬ್ಯಾಂಕ್ 1782ರಲ್ಲಿ ಫಿಲಿಡೆಲ್ಫಿಯಾದಲ್ಲಿ ಸ್ಥಾಪಿತವಾಯಿತು.
* ಇಂಗ್ಲೆಂಡ್ ನಲ್ಲಿ ಮೊದಲು ಬ್ಯಾಂಕ್ 1825ರಲ್ಲಿ ಆರಂಭವಾಯಿತು.
* ಭಾರತದಲ್ಲಿ ಸ್ಥಾಪಿತವಾದ ಮೊಟ್ಟ ಮೊದಲ ಬ್ಯಾಂಕ್ "ಪ್ರೆಸಿಡೆನ್ಸಿಯಲ್ ಬ್ಯಾಂಕ್ ಆಫ್ ಬಾಂಬೆ" ಅದು 1804ರಲ್ಲಿ ಸ್ಥಾಪನೆಗೊಂಡಿತು.
* ಭಾರತದ ಮೊಟ್ಟಮೊದಲ ಪೂರ್ಣ ರೂಪದ ಬ್ಯಾಂಕ್ ಎಂದರೆ ಪಂಜಾಬ್ ನ್ಯಾಷಿನಲ್ ಬ್ಯಾಂಕ್. ಈ ಬ್ಯಾಂಕ್ 1894ರಲ್ಲಿ ಸ್ಥಾಪಿತವಾಯಿತು.
* ಭಾರತದ ರಿಸರ್ವ್ ಬ್ಯಾಂಕನ್ನು ಸರ್ಕಾರ 1935ರ ಏಪ್ರಿಲ್ನಲ್ಲಿ ಸ್ಥಾಪಿಸಿತು. ಇಂದು ಈ ಬ್ಯಾಂಕ್ ದೇಶದಲ್ಲಿನ ಚಲಾವಣೆಗಾಗಿ ಎಲ್ಲ ಕರೆನ್ಸೀ ನೋಟುಗಳನ್ನು ಮತ್ತು ಲೋಹದ ನಾಣ್ಯಗಳನ್ನು ಹೊರಡಿಸುತ್ತದೆ. ಇಂದು ಬ್ಯಾಂಕುಗಳು ಅನೇಕ ಸೌಲಭ್ಯಗಳನ್ನು ಒದಗಿಸುತ್ತವೆ. ಹಣವನ್ನು ಜಮಾ ಮಾಡುವುದಷ್ಟೇ ಅಲ್ಲದೆ ಬೆಲೆಬಾಳುವ ಆಭರಣಗಳನ್ನು ನಾವು ಬ್ಯಾಂಕುಗಳಲ್ಲಿ ಇಡಬಹುದು. ತನ್ನ ಜೋಜನೆಗಳಿಗಾಗಿ ಯಾವುದಾದರೊಂದು ದೇಶಕ್ಕೆ ಹಣದ ಅಗತ್ಯವಿದ್ದಾಗ ವಿಶ್ವಬ್ಯಾಂಕ್ನಿಂದ ಸಾಲ ಪಡೆಯಬಹುದು.

No comments:

Post a Comment