Thursday, 23 July 2015

ಕರ್ನಾಟಕದ ಜನಸಂಖ್ಯೆ

ಒಂದು ನಿರ್ದಿಷ್ಟವಾದ ಭೂ ಪ್ರದೇಶದಲ್ಲಿ ವಾಸಿಸುವ ಜನರ ಒಟ್ಟು ಸಮೂಹವನ್ನು ಜನಸಂಖ್ಯೆ ಎನ್ನುವರು.
✅೨೦೧೧ ರ ಜನಗಣತಿಯ ಪ್ರಕಾರ ಕರ್ನಾಟಕವು ೬,೧೧,೩೦,೭೦೪ ಜನಸಂಖ್ಯೆಯನ್ನು ಹೊಂದಿದೆ.ಇದರಲ್ಲಿ ಪುರುಷರ ಸಂಖ್ಯೆ - ೩,೧೦,೫೭,೭೪೨ ಆಗಿದೆ. ಮತ್ತು ಮಹಿಳೆಯರ ಸಂಖ್ಯೆ - ೩,೦೦,೭೨,೬೬೨ ಆಗಿದೆ.
ಬೆಂಗಳೂರು ನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಜಿಲ್ಲೆಯಾಗಿದ್ದು, ಕೊಡಗು ಕಡೆಯ ಸ್ಥಾನದಲ್ಲಿದೆ.
✅ಜನಸಾಂದ್ರತೆ :-೨೦೧೧ ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದ ಜನಸಾಂದ್ರತೆ ೩೧೯ ಆಗಿದೆ.
ಬೆಂಗಳೂರು ನಗರ ಜಿಲ್ಲೆಯು ಅಧಿಕ ಜನಸಾಂದ್ರತೆ ಹೊಂದಿದ್ದು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
✅ಕೊಡಗು ಜಿಲ್ಲೆಯು(೧೩೫) ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ.
ಲಿಂಗಾನುಪಾತ :-೨೦೧೧ ರ ಜನಗಣತಿಯ ಪ್ರಕಾರ ರಾಜ್ಯದ ಲಿಂಗಾನುಪಾತ ೯೬೮ ಆಗಿದೆ.
✅ಉಡುಪಿ, ಕೊಡಗು, ದ.ಕನ್ನಡ, ಹಾಸನ ಜಿಲ್ಲೆಗಳಲ್ಲಿ ಪುರಷರಿಗಿಂತ ಹೆಚ್ಚು ಮಹಿಳೆಯರು ಕಂಡು ಬರುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ ೧೦೯೩ ಸ್ತ್ರೀಯರಿದ್ದು ರಾಜ್ಯದಲ್ಲೇ ಅತಿ ಹೆಚ್ಚ್ಚು ಸ್ತ್ರೀಯರ ಪ್ರಮಾಣವುಳ್ಳ ಜಿಲ್ಲೆಯಾಗಿದೆ.
✅ಬೆಂಗಳೂರು ನಗರ ಜಿಲ್ಲೆಯು ಪ್ರತಿ ಸಾವಿರ ಪುರಷರಿಗೆ ೯೦೮ ಮಹಿಳೆಯರನ್ನು ಹೊಂದಿದ್ದು ರಾಜ್ಯದ ಕಡೆಯ ಸ್ಥಾನದಲ್ಲಿದೆ.
✅ಸಾಕ್ಷರತೆಯ ಪ್ರಮಾಣ :-೨೦೧೧ ರ ಜನಗಣತಿಯ ಪ್ರಕಾರ ರಾಜ್ಯದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ. ೭೫.೬ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಶೇ. ೮೮.೬% ರಷ್ಟು ಸಾಕ್ಷರತೆ ಹೊಂದಿದ್ದು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.ನಂತರ ಬೆಂಗಳೂರು ನಗರ ಜಿಲ್ಲೆಯು (೮೮.೫%) ರಷ್ಟು ಹೊಂದಿದ್ದು ಎರಡನೆಯ ಸ್ಥಾನದಲ್ಲಿದೆ. ಮತ್ತು ಉಡುಪಿ ಮೂರನೆಯ ಸ್ಥಾನದಲ್ಲಿದೆ.
✅ಯಾದಗಿರಿ ಜಿಲ್ಲೆಯು (೫೨.೪%) ಅತಿ ಕಡಿಮೆ ಸಾಕ್ಷರತಯುಳ್ಳ ಜಿಲ್ಲೆಯಾಗಿದೆ.
✅ಪುರಷರ ಸಾಕ್ಷರತೆಯ ಪ್ರಮಾಣವು ಶೇ. ೮೨.೯% ರಷ್ಟಿದ್ದು, ಮಹಿಳೆಯರ ಸಾಕ್ಷರತೆಯ ಪ್ರಮಾಣವು ಶೇ. ೬೮.೨% ರಷ್ಟಿರುತ್ತದೆ.

No comments:

Post a Comment