Thursday, 23 July 2015

ಕನ್ನಡ ವ್ಯಾಕರಣ - ಸಮಾಸಗಳು‬

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ. ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು, ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.
ಉದಾ: 'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.
ವಿಗ್ರಹವಾಕ್ಯ
ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ. "ಸಮಸ್ತ ಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹ ವಾಕ್ಯ ಎನ್ನುವರು"
ಸಮಾಸದ ವಿಧಗಳು   


ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವುಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು.
ಅರಮನೆ ಎಂಬ ಸಮಸ್ತಪದವನ್ನು ಬಿಡಿಸಿದಾಗ, ಅರಸನ ಮನೆ ಎಂದಾಗುವುದು. ಯಾರ ಮನೆ? ಎಂಬ ಪ್ರಶ್ನೆಗೆ, ಅರಸನಿಗೆ ಸಂಬಂಧಿಸಿದ ಮನೆ ಎಂದು ಗೊತ್ತಾಗುವುದು. ಹಾಗಾಗಿ, ಇಲ್ಲಿ ಅರಸನ ಎಂಬ ಪದದ ಅರ್ಥ ಮುಖ್ಯವೋ? ಮನೆ ಎಂಬ ಪದದ ಅರ್ಥ ಮುಖ್ಯವೊ? ಎಂಬುದನ್ನು ಗಮನಿಸಿದಾಗ , ಅರ್ಥೈಸಿದಾಗ , ಅರಸ , ಅವನಿಗೆ ಸಂಬಂಧಿಸಿದ - ಅರಸನ ಮನೆ ಎಂಬುದು ಸ್ಪಷ್ಟವಾಗುತ್ತದೆ .
ಈ ಸಮಸ್ತಪದದಲ್ಲಿ, ಮನೆ ಎಂಬ ಪದ ಮುಖ್ಯ..
'ಕಾಲುಬಳೆ ಎಂಬ ಸಮಸ್ತಪದದಲ್ಲಿಯೂ ಹೀಗೆಯೇ ಕಾಲಿನ ಸಂಬಂಧವಾದ ಬಳೆ ಎಂಬರ್ಥ ಬರುವುದು.ಬಳೆಗಳು ಅನೇಕ ವಿಧ. ಆದರೆ ಕಾಲಿನ ಎಂಬ ಪದವು, ಕಾಲಿಗೆ ಸಂಬಂಧಿಸಿದ ಬಳೆ ಎಂಬ ಅರ್ಥವನ್ನು ಪ್ರಧಾನವೆಂದು ಸೂಚಿಸುತ್ತದೆ. ಕಾಲಿನ ಬಳೆ =ಕಾಲುಬಳೆ . ( ಕಾಲ್ಬಳೆ ) . ಇಲ್ಲಿ, ಪೂರ್ವಪದದಲ್ಲಿ, ಷಷ್ಠೀ ವಿಭಕ್ತಿ ಇದ್ದು, ಅದು ಸಮಾಸವಾದಾಗ ಲೋಪವಾಗುವುದು. ಹಾಗಾಗಿ, ಇದನ್ನು ಷಷ್ಠೀ ತತ್ಪುರುಷ ಸಮಾಸ ಎಂದು ಕರೆಯುತ್ತಾರೆ.
ಪೂರ್ವಪದವು ತೃತೀಯಾದಿ ವಿಭಕ್ತಿಗಳಿಂದ ಮೊದಲ್ಗೊಂಡು ಸಪ್ತಮೀ ವಿಭಕ್ತಿಯವರೆಗೆ ಯಾವುದಾದರೂ ವಿಭಕ್ತ್ಯಂತವಾಗಿರಬೇಕು. ಆಗ ಪೂರ್ವಪದದ ವಿಭಕ್ತಿ ಯಾವುದಿದೆಯೋ ಅದರ ಹೆಸರಿನಲ್ಲಿ ಸಮಾಸವನ್ನು ಹೇಳಲಾಗುತ್ತದೆ.
ಕನ್ನಡ - ಕನ್ನಡ ಪದಗಳುಮರದ ಕಾಲು = ಮರಗಾಲು (ಷಷ್ಠೀ ತತ್ಪುರುಷ ಸಮಾಸ)
ಬೆಟ್ಟದ ತಾವರೆ = ಬೆಟ್ಟದಾವರೆ (ಷಷ್ಠೀ ತತ್ಪುರುಷ ಸಮಾಸ)
ಕಲ್ಲಿನ ಹಾಸಿಗೆ = ಕಲ್ಲುಹಾಸಿಗೆ (ಷಷ್ಠೀ ತತ್ಪುರುಷ ಸಮಾಸ)
ತಲೆಯಲ್ಲಿ ನೋವು = ತಲೆನೋವು (ಸಪ್ತಮೀ ತತ್ಪುರುಷ ಸಮಾಸ)
ಹಗಲಿನಲ್ಲಿ ಕನಸು = ಹಗಲುಗನಸು (ಸಪ್ತಮೀ ತತ್ಪುರುಷ ಸಮಾಸ)
ತೇರಿಗೆ ಮರ = ತೇರುಮರ (ಚತುರ್ಥೀ ತತ್ಪುರುಷ ಸಮಾಸ)
ಕಣ್ಣಿನಿಂದ ಕುರುಡ = ಕಣ್ಣುಕುರುಡ { ಕಣ್ಗುರುಡ } (ತೃತೀಯಾ ತತ್ಪುರುಷ ಸಮಾಸ)
ಸಂಸ್ಕೃತ -
ಸಂಸ್ಕೃತ ಪದಗಳುಕವಿಗಳಿಂದ ವಂದಿತ = ಕವಿವಂದಿತ (ತೃತೀಯಾ ತತ್ಪುರುಷ ಸಮಾಸ)
ವ್ಯಾಘ್ರದ ದೆಸೆಯಿಂದ ಭಯ = ವ್ಯಾಘ್ರಭಯ (ಪಂಚಮೀ ತತ್ಪುರುಷ ಸಮಾಸ)
ಉತ್ತಮರಲ್ಲಿ ಉತ್ತಮ = ಉತ್ತಮೋತ್ತಮ (ಸಪ್ತಮೀ ತತ್ಪುರುಷ ಸಮಾಸ)
ದೇವರ ಮಂದಿರ = ದೇವಮಂದಿರ (ಷಷ್ಠೀ ತತ್ಪುರುಷ ಸಮಾಸ)
ಧನದ ರಕ್ಷಣೆ = ಧನರಕ್ಷಣೆ (ಷಷ್ಠೀ ತತ್ಪುರುಷ ಸಮಾಸ)
ವಯಸ್ಸಿನಿಂದ ವೃದ್ಧ = ವಯೋವೃದ್ಧ (ತೃತೀಯಾ ತತ್ಪುರುಷ ಸಮಾಸ)









ಕರ್ಮಧಾರಯ ಸಮಾಸ
ಈ ಸಮಾಸದಲ್ಲಿಯೂ ಉತ್ತರ ಪದದ ಅರ್ಥ ಪ್ರಧಾನವಾಗಿರುತ್ತದೆ. ಇದರಲ್ಲಿ ಸಾಮಾನ್ಯವಾಗಿ ವಿಶೇಶಣ‍‍ ಮತ್ತು ವಿಶೇಶ್ಯ ಗಳಿಗೆ ಸಮಾಸವಾಗಿ ವಿಶೇಶ್ಯದ ಅರ್ಥ ಪ್ರಧಾನವಾಗಿರುತ್ತದೆ.ವಿಶೇಶಣವಾಗಿರುವ ಪದ ಸಾಮಾನ್ಯವಾಗಿ ಗುಣವಾಚಕವಾಗಿರುತ್ತದೆ, ಇಲ್ಲವೆ ಕೃನ್ನಾಮವಾಗಿರುತ್ತದೆ.
ಹೊಸದು + ಕನ್ನಡ = ಹೊಸಗನ್ನಡ (ವಿಶೇಶಣ ಪೂರ್ವ ಪದ ಸಮಾಸ) ಅಂತರವಾದ + ದೇಶ = ದೇಶಾಂತಾರ (ವಿಶೇಶಣೋತ್ತರ ಪದ ಸಮಾಸ) ಯೋಗವು + ಅಯೋಗವು = ಯೋಗಾಯೋಗವು (ವಿಶೇಶಣೋಭಯ ಪದ ಸಮಾಸ)
ಎಲೆಯಂತೆ + ಹಸಿರು = ಎಲೆಹಸಿರು (ಉಪಮಾನ ಪೂರ್ವ ಪದ ಸಮಾಸ) ಚರಣಗಳು + ಕಮಲದಂತೆ = ಚರಣಕಮಲ (ಉಪಮಾನೋತ್ತರ ಪದ ಸಮಾಸ)



 ದ್ವಿಗು ಸಮಾಸ
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು.
ಎರಡು+ಕೆಲ=ಇಕ್ಕೆಲ
ಮೂರು+ಮಡಿ=ಮುಮ್ಮಡಿ
ಇಲ್ಲಿ, ಸಂಖ್ಯಾವಾಚಕವಾದ ಪೂರ್ವ ಪದವು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಸಮಸ್ತಪದವಾಗಿದೆ. ದ್ವಿಗು ಸಮಾಸದಲ್ಲಿ, ಪೂರ್ವ ಪದವುಸಂಖ್ಯಾವಾಚಕವಾಗಿರಲೇ ಬೇಕು.
ಕನ್ನಡ - ಕನ್ನಡ ಪದಗಳುಒಂದು+ಕಟ್ಟು = ಒಗ್ಗಟ್ಟು
ಎರಡು+ಮಡಿ = ಇಮ್ಮಡಿ
ನಾಲ್ಕು+ಮಡಿ = ನಾಲ್ವಡಿ
ಐದು+ಮಡಿ = ಐವಡಿ
ಎರಡು+ಬಾಳ್ = ಇರ್ವಾಳ್
ಮೂರು+ಗಾವುದ = ಮೂಗಾವುದ
ಒಂದು+ಕಣ್ಣು = ಒಕ್ಕಣ್ಣು
ಸಂಸ್ಕೃತ -
ಸಂಸ್ಕೃತ ಪದಗಳು
ಪಂಚಗಳಾದ+ಇಂದ್ರಿಯಗಳು = ಪಂಚೇಂದ್ರಿಯಗಳು
ಸಪ್ತಗಳಾದ+ ಅಂಗಗಳು = ಸಪ್ತಾಂಗಗಳು
ದಶಗಳಾದ+ಮುಖಗಳು = ದಶಮುಖಗಳು
ಅಷ್ಟಾದಶಗಳಾದ+ಪುರಾಣಗಳು = ಅಷ್ಟಾದಶಪುರಾಣಗಳು
ಏಕವಾದ+ಅಂಗ = ಏಕಾಂಗ

 

ಅಂಶಿ ಸಮಾಸ
ಇಲ್ಲಿ ಸಮಾಸವು ಪೂರ್ವೋತ್ತರ ಪದಗಳ ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವುದು. ಪೂರ್ವಪದದ ಅರ್ಥವು ಇಲ್ಲಿ ಪ್ರಧಾನವಾಗಿರುತ್ತದೆ. ಕೆಲವರು ಇದನ್ನು ಅವ್ಯಯೀ ಭಾವವೆಂದೂ ಕರೆಯುತ್ತಾರೆ. ಇಲ್ಲಿ ಅಂಶ ಮುಖ್ಯವೇ ಹೊರೆತು ಅಂಶಿಯಲ್ಲ.
ತಲೆಯ + ಮುಂದು = ಮುಂದಲೆ ಮೈಯಿನ + ಮೇಲೆ = ಮೇಲ್ಮೈ



ದ್ವಂದ್ವ ಸಮಾಸ
ಎರಡು ಅಥವಾ ಅನೇಕ ನಾಮಪದಗಳೂಸಹಯೋಗ ತೋರುವಂಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆದ್ವಂದ್ವ ಸಮಾಸವೆಂದು ಹೆಸರು.
ಆತನು ಹೊಲಮನೆ ಮಾಡಿಕೊಂಡ್ಡಿದ್ದಾನೆ.ಕೆರೆಕಟ್ಟೆಗಳನ್ನು ಕಟ್ಟಿಸಿದನು.
ಈ ವಾಕ್ಯಗಳಲ್ಲಿ ಕಾಣುವ ಹೊಲಮನೆ, ಕೆರೆಕಟ್ಟೆ ಪದಗಳನ್ನು ಬಿಡಿಸಬಹುದು. ಹಾಗೆ, ಬಿಡಿಸಿ ಬರೆದಾಗ
ಹೊಲವನ್ನು+ಮನೆಯನ್ನು= ಹೊಲಮನೆಯನ್ನು ಅಥವಾ ಹೊಲಮನೆಗಳನ್ನು ಎಂದೂಕೆರೆಯನ್ನು+ಕಟ್ಟೆಯನ್ನು= ಕೆರೆಕಟ್ಟೆಯನ್ನು ಅಥವಾ ಕೆರೆಕಟ್ಟೆಗಳನ್ನು ಎಂದೂ
ಹೇಳಬಹುದು.
ಇಲ್ಲಿ, ಇತರ ಸಮಾಸಗಳಂತೆ ಪೂರ್ವದ ಅಥವಾ ಉತ್ತರದ ಯಾವುದಾದರೊಂದು ಪದದ ಅರ್ಥಕ್ಕೆಪ್ರಾಧಾನ್ಯತೆಯಿರದೆ, ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವವು.
ಹೊಲವನ್ನು ಮಾಡಿಕೊಂಡನು, ಮನೆಯನ್ನು ಮಾಡಿಕೊಂಡನು ಎಂದರೆ, ಹೊಲ, ಮನೆ ಎರಡೂ ಪದಗಳಿಗೆ ಸಹಯೋಗ ತೋರುತ್ತದೆ.
ಹೊಲಕ್ಕೆ ಮನೆಯ, ಮನೆಗೆ ಹೊಲದ ಸಹಯೋಗ ಕರ್ತೃವಿಗೆ ಇದೆಯೆಂಬ ಅರ್ಥ. ಹಾಗೆಯೇ, ಕೆರೆಯನ್ನು, ಕಟ್ಟೆಯನ್ನು ಇವೆರಡು ಪದಗಳಿಗೂ ಕರ್ತೃಪದಕ್ಕೂ ಸಹಯೋಗವಿರುತ್ತದೆ.
ಹೀಗೆ ಸಹಯೋಗ ತೋರುವಂತೆ ಹೇಳುವ ಸಮಾಸವೇ ದ್ವಂದ್ವ ಸಮಾಸ. ಈ ಸಮಾಸದಲ್ಲಿ ಎರಡಕ್ಕಿಂತ ಹೆಚ್ಚು ಪದಗಳೂ ಇರಬಹುದು.
ಕನ್ನಡ -
ಕನ್ನಡ ಪದಗಳು
ಕೆರೆಯೂ+ಕಟ್ಟೆಯೂ+ಬಾವಿಯೂ - ಕೆರೆಕಟ್ಟೆಬಾವಿಅಥವಾ ಕೆರೆಕಟ್ಟೆಬಾವಿಗಳುಗಿಡವೂ+ಮರವೂ+ಬಳ್ಳಿಯೂ+ಪೊದೆಯೂ -ಗಿಡಮರಬಳ್ಳಿಪೊದೆ ಅಥವಾಗಿಡಮರಬಳ್ಳಿಪೊದೆಗಳು
ಆನೆಯೂ+ಕುದುರೆಯೂ+ಒಂಟೆಯೂ -ಆನೆಕುದುರೆಒಂಟೆ ಅಥವಾ ಆನೆಕುದುರೆಒಂಟೆಗಳುಗುಡುಗೂ+ಸಿಡಿಲೂ+ಮಿಂಚೂ -ಗುಡುಗುಸಿಡಿಲುಮಿಂಚು ಅಥವಾಗುಡುಗುಸಿಡಿಲುಮಿಂಚುಗಳು
ಸಂಸ್ಕೃತ -
ಸಂಸ್ಕೃತ ಪದಗಳುಗಿರಿಯೂ+ವನವೂ+ದುರ್ಗವೂ - ಗಿರಿವನದುರ್ಗಅಥವಾ ಗಿರಿವನದುರ್ಗಗಳು
ಸೂರ್ಯನೂ+ಚಂದ್ರನೂ+ನಕ್ಷತ್ರವೂ -ಸೂರ್ಯಚಂದ್ರನಕ್ಷತ್ರ ಅಥವಾಸೂರ್ಯಚಂದ್ರನಕ್ಷತ್ರಗಳು
ಕರಿಯೂ+ತುರಗವೂ+ರಥವೂ - ಕರಿತುರಗರಥಅಥವಾ ಕರಿತುರಗರಥಗಳು
ಇಲ್ಲಿ ದ್ವಂದ್ವ ಸಮಾಸವಾದ ಮೇಲೆ, ಸಮಸ್ತಪದವು,ಏಕವಚನವಾಗಿಯೂ, ಬಹುವಚನವಾಗಿಯೂ ಅಂತ್ಯಗೊಳ್ಳುವುದುಂಟು. ಏಕವಚನವಾಗಿ ಅಂತ್ಯಗೊಂಡರೆ, ಸಮಾಹಾರ ದ್ವಂದ್ವ ಸಮಾಸವೆಂದೂ, ಬಹುವಚನವಾಗಿ ಅಂತ್ಯಗೊಂಡರೆ, ಇತರೇತರ ದ್ವಂದ್ವ ಸಮಾಸವೆಂದು ಹೆಸರು.


ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳುಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆಬಹುವ್ರೀಹಿ ಎಂಬ ಹೆಸರು.
ಹಣೆಗಣ್ಣ , ಮುಕ್ಕಣ್ಣ , ನಿಡುಮೂಗ - ಈ ಪದಗಳನ್ನು ಬಿಡಿಸಿ ಬರೆದರೆ ,
ಹಣೆಯಲ್ಲಿ + ಕಣ್ಣು ಉಳ್ಳವನು ಯಾರೋ ಅವನು - ಹಣೆಗಣ್ಣ (ಶಿವ)
ಮೂರು + ಕಣ್ಣು ಉಳ್ಳವನು ಯಾರೋ ಅವನು - ಮುಕ್ಕಣ್ಣ (ಶಿವ)
ನಿಡಿದು + ಮೂಗನ್ನು ಉಳ್ಳವನು ಯಾರೋ ಅವನು - ನಿಡುಮೂಗ
ಹಣೆಯಲ್ಲಿ + ಕಣ್ಣು ಉಳ್ಳವ - ಈ ಎರಡೂ ಪದಗಳ ಅರ್ಥ ಇಲ್ಲಿ ಮುಖ್ಯವಲ್ಲ . ಈ ಎರಡೂ ಪದಗಳ ಅರ್ಥದಿಂದ ಹೊಳೆಯುವ ಅನ್ಯ ಪದ ಶಿವ ಮುಖ್ಯ. ಇಲ್ಲಿ ಮೂರನೆಯ (ಅನ್ಯ ಪದ) ಪದದ ಅರ್ಥವೇ ಪ್ರಮುಖವಾಗಿ ಗೋಚರಿಸುತ್ತದೆ.
ಮೂರು ಕಣ್ಣು ಉಳ್ಳವ - ಅಂದರೆ ಶಿವ ಎಂಬ ಅರ್ಥ ಮುಖ್ಯ.. ಶಿವನಿಗೆ ಮೂರನೆಯ - ಜ್ಞಾನ ಚಕ್ಷು ಇರುವುದೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅನ್ತೆಯೇ ಹಣೆಗಣ್ಣ ಎಂಬ ಪದ.
ಹೀಗೆ ಸಮಾಸದಲ್ಲಿರುವ ಪದಗಳ ಅರ್ಥಕ್ಕೆ ಪ್ರಾಧಾನ್ಯತೆಯೇ ಇಲ್ಲದೆ ಅನ್ಯವಾದ ಬೇರೊಂದು ಪದವು ಇಲ್ಲಿ ಪ್ರಧಾನವಾಗಿ ಬರುತ್ತದೆ.


ಬಹುವ್ರೀಹಿ ಸಮಾಸದ ವಿಧಗಳು.
ಪೂರ್ವದ ಹಾಗೂ ಉತ್ತರದ ಪದಗಳೆರಡೂ ಸಮಾನ ವಿಭಕ್ತಿಗಳಿಂದ ಕೂಡಿದ್ದರೆ ಅವನ್ನು ಸಮಾನಾಧಿಕರಣ ಬಹುವ್ರೀಹಿ ಎಂದು ಹೆಸರು.
ಪೂರ್ವದ ಹಾಗೂ ಉತ್ತರದ ಪದಗಳೆರಡೂ ಭಿನ್ನ ಭಿನ್ನ ವಿಭಕ್ತಿಗಳಿಂದ ಕೂಡಿದ್ದರೆ ಅವನ್ನು ವ್ಯಧಿಕರಣ ಬಹುವ್ರೀಹಿ ಎಂದು ಹೆಸರು.
(ವಿ+ಅಧಿಕರಣ = ವ್ಯಧಿಕರಣ - ವಿಗತವಾದ ಅಧಿಕರಣ)ಕನ್ನಡ - ಕನ್ನಡ ಪದಗಳುಮೂರು ಕಣ್ಣು ಉಳ್ಳವ - ಮುಕ್ಕಣ್ಣ (ಸಮಾನಾಧಿಕರಣ ಬಹುವ್ರೀಹಿ) (ಮೂರು, ನಾಲ್ಕು - ಈ ರೀತಿ ಸಂಖ್ಯಾ ವಾಚಕ ಪದವಿದ್ದರೂ ಇವು ದ್ವಿಗು ಸಮಾಸನಾಲ್ಕು ಮೊಗ ಉಳ್ಳವ - ನಾಲ್ಮೊಗ (ಸಮಾನಾಧಿಕರಣ ಬಹುವ್ರೀಹಿ) (ಮುಖ - ತತ್ಸಮ : ಮೊಗ - ತದ್ಭವಕೆಂಪು ಕಣ್ಣು ಉಳ್ಳವ - ಕೆಂಗಣ್ಣ (ಸಮಾನಾಧಿಕರಣ ಬಹುವ್ರೀಹಿ)ಡೊಂಕು ಕಾಲು ಉಳ್ಳವ - ಡೊಂಕುಗಾಲ (ಸಮಾನಾಧಿಕರಣ ಬಹುವ್ರೀಹಿ)ಕಡುದಾದ ಚಾಗ ಮಾಡುವವನು - ಕಡುಚಾಗಿ (ಸಮಾನಾಧಿಕರಣ ಬಹುವ್ರೀಹಿ) (ತ್ಯಾಗ - ತತ್ಸಮ : ಚಾಗ -ತದ್ಭವಹಣೆಯಲ್ಲಿ ಕಣ್ಣು ಉಳ್ಳವ - ಹಣೆಗಣ್ಣ (ವ್ಯಧಿಕರಣ ಬಹುವ್ರೀಹಿ)ಕಿಚ್ಚು ಕಣ್ಣಿನಲ್ಲಿ ಆವಂಗೋ ಅವನು - ಕಿಚ್ಚುಗಣ್ಣ (ವ್ಯಧಿಕರಣ ಬಹುವ್ರೀಹಿ)ಸಂಸ್ಕೃತ - ಸಂಸ್ಕೃತ ಪದಗಳುಇಕ್ಷುವನ್ನು ಕೋದಂಡವಾಗಿ ಉಳ್ಳವನು - ಇಕ್ಷುಕೋದಂಡ (ಸಮಾನಾಧಿಕರಣ ಬಹುವ್ರೀಹಿ)ಚಕ್ರವು ಪಾಣಿಯಲ್ಲಿ ಆವಂಗೋ ಅವನು - ಚಕ್ರಪಾಣಿ (ವ್ಯಧಿಕರಣ ಬಹುವ್ರೀಹಿ)ಫಾಲದಲ್ಲಿ ನೇತ್ರವನ್ನು ಉಳ್ಳವನು - ಫಾಲನೇತ್ರ (ವ್ಯಧಿಕರಣ ಬಹುವ್ರೀಹಿ)

1 comment: