Friday 3 July 2015

ಕರ್ನಾಟಕದ ಖನಿಜ ಸಂಪನ್ಮೂಲಗಳು:-

ನಮ್ಮ ರಾಜ್ಯ ವಿವಧ ಖನಿಜ ಸಂಪತ್ತುಗಳನ್ನು ಹೊಂದಿದೆ.ಅವುಗಳಲ್ಲಿ ಮುಖ್ಯವಾದವುಗಳೆಂದರೆ - ಕಬ್ಬಿಣದ ಅದಿರು, ಚಿನ್ನ, ಮ್ಯಾಂಗನೀಸ್, ಬಾಕ್ಸೈಟ್, ತಾಮ್ರ, ಅಭ್ರಕ ಮಂತಾದವು.ಕಬ್ಬಿಣದ ಅದಿರು, ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕಚ್ಚಾ ವಸ್ತು. ನಮ್ಮ ರಾಜ್ಯದಲ್ಲಿ ಮ್ಯಾಗ್ನಟೈಟ್ ಮತ್ತು ಹೆಮಾಟೈಟ್ ವಿವಿಧ ಕಬ್ಬಿಣದ ಅದಿರಿನ ನಿಕ್ಷೇಪಗಳು ಕಂಡು ಬರುವ ಜಿಲ್ಲೆಗಳೆಂದರೆ-ಬಳ್ಳರಿ, ಚಿಕ್ಕಮಗಳೂರು,ಚಿತ್ರದುರ್ಗ,ಶಿವಮೊಗ್ಗ, ಉತ್ತರ ಕನ್ನಡ, ಗದಗ ಮುಂತಾದವು.ಮ್ಯಾಂಗನೀಸ್ ಇದನ್ನು ಮಿಶ್ರ ಲೋಹವಾಗಿ ಉಕ್ಕಿನ ತಯಾರಿಕೆಯಲ್ಲಿ ಕಾಠಿಣ್ಯತೆಯನ್ನು ಹೆಚ್ಚಿಸಲು ಬಳಸುತ್ತಾರೆ.ರಾಸಾಯನಿಕ, ವಿದ್ಯುತ್ ತಯಾರಿಕೆ, ಗೊಬ್ಬರ, ಬಣ್ಣಗಳ ತಯಾರಿಕೆಯಲ್ಲಿ ಕೂಡಾ ಬಳಸುತ್ತಾರೆ. ಈ ಖನಿಜವನ್ನು ಉತ್ಪಾದಿಸುವ ಜಿಲ್ಲೆಗಳೆಂದರೆ -ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಧಾರವಾಡ, ಬಿಜಾಪುರ, ಚಿಕ್ಕಮಗಳೂರು ಮುಂತಾದವು.
ಬಾಕ್ಸೈಟ್ :-
ಇದನ್ನು ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುತ್ತಾರೆ.ಜೊತೆಗೆ ಸಿಮೆಂಟ್, ಉಕ್ಕು, ವಿದ್ಯುತ್ ತಂತಿಗಳ ತಯಾರಿಕೆಯಲ್ಲು ಬಳಸುತ್ತಿರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು.ಬೆಳಗಾವಿ ಜಿಲ್ಲೆಯು ಪ್ರಮುಖ ಬಾಕ್ಸೈಟ್ ಉತ್ಪಾದಿಸುವ ಜಿಲ್ಲೆಯಗಿದೆ.
ಚಿನ್ನ :-
ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಆದ್ದರಿಂದ ಇದನ್ನು "ಚಿನ್ನದ ನಾಡು"ಎಂದೇ ಕರೆಯಲಾಗುತ್ತದೆ.ಪ್ರಾಚೀನ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಗಣಿಗಾರಿಕೆಯನ್ನು ೧೮೮೦ರಲ್ಲಿ ಜಾನ್ ಟೇಲರ್ ಎಂಬುವವನು ಪ್ರಾರಂಭ ಮಾಡಿದರ ಹೀಗಾಗಿ ಮುಂದ ಇದು ೧೮೮೫ ರಲ್ಲಿ’ಕೆ.ಜಿ.ಎಫ್’ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.ಕೋಲಾರದ ಚಿನ್ನದ ಗಣಿಯಲ್ಲಿ ನಾಲ್ಕು ಪ್ರಮುಖ ಗಣಿಗಳಿವೆ. ಅವುಗಳೆಂದರೆ :- ನಂದಿದುರ್ಗ, ಉರಿಗಾಂ, ಚಾಂಪಿಯನ್ ರೀಫ್ ಮತ್ತು ಮೈಸೂರು ಗಣಿ.ಇದರಲ್ಲಿ ಚಾಂಪಿಯನ್ ರೀಫ್ ಅತ್ಯಂತ ಆಳವಾದ ಚಿನ್ನದ ಗಣಿಯಾಗಿದೆ(೩೨೧೭ ಮೀ.).ಪ್ರಸ್ತುತ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಭಾರತದ ಅತಿ ದೊಡ್ಡ ಚಿನ್ನದ ಗಣಿಯಾಗಿದೆ.ಇತರೆ ಚಿನ್ನದ ನಿಕ್ಷೇಪಗಳೆಂದರೆ - ತುಮುಕೂರಿನ ಬೆಳ್ಳಾರ, ಶಿರಾ ಸಮೀಪದ ಅಜ್ಜನಹಳ್ಳಿ, ಗದಗ ಜಿಲ್ಲೆಯ ಮುಳುಗುಂದ, ಕಪ್ಪತಗುಡ್ಡ, ಹಾಸನ ಜಿಲ್ಲೆಯ ಕೆಂಪಿನಕೋಟೆ ಮುಂತಾದವುಗಳು.

No comments:

Post a Comment